ಓದಲೇಬೇಕಾದ ಪ್ರಮುಖ ಮಾಹಿತಿ ಇದು



ಓದಲೇಬೇಕಾದ ಮಾಹಿತಿ ಇದು





ಪ್ರಪಂಚದಲ್ಲಿ ಅತೀ ಹೆಚ್ಚು ಚಹಾ ಆಮುದು ಮಾಡಿಕೊಳ್ಳುವ ದೇಶ - ಪಾಕಿಸ್ಥಾನ



ಭಾರತ ಇದೇ ಮೊದಲ ಬಾರಿಗೆ ಆಸಿಯಾನ್ ದೇಶಗಳ ವಿದೇಶಾಂಗ ಸಚಿವರ ವಿಶೇಷ ಸಭೆ ಆಯೋಜನೆ ಮಾಡಿದೆ..




ಗೋವಾದಲ್ಲಿ ಇತ್ತೀಚಿಗೆ ನಿರ್ಮಾಣ ಗೊಂದ ಹೊಸ ರಾಜ್ಯ ಭವನಕ್ಕೆ ಚಾಲನೆ ನೀಡಿದವರು - ರಾಷ್ಟ್ರಪತಿ ರಾಮನಾಥ ಕೋವಿಂದ್




ಅಮರನಾಥ್ ಕಾಪ್ಟರ್ ಬುಕಿಂಗ್ ಪೋರ್ಟಲ್ ಚಾಲನೆ ನೀಡಿದ ರಾಜ್ಯ - ಜಮ್ಮು ಕಾಶ್ಮೀರ





ಅಮೆರಿಕಾದ ರಕ್ಷಣೆಯ ಇಲಾಖೆಯ ಸ್ವಾದೀನ ಮತ್ತು ಸುಸ್ಥಿರತೆಗೆ ರಕ್ಷಣಾ ಉಒ ಅಧೀನ ಕಾರ್ಯದರ್ಶಿ ಹುದ್ದೆಗೆ ನೇಮಕ‌ಗೊಂದ ಭಾರತದ ಮಹಿಳೆ - ರಾ್ದ ಆಯ್ಯಂಗಾರ್




ಮುಂಬರುವ ಪ್ರತಿಷ್ಠಿತ ಕಾಮನ್ ವೇಲ್ತ್ ಕ್ರೀಡಾಕೂಟಕ್ಕೆ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಆಥ್ಲೀಟ್ ನಿರೇಜ್ ಚೂಪ್ರಾ ನಾಯಕತ್ವ ವಹಿಸಿಕೊಂಡಿದ್ದಾರೆ.


ಐರ್ಲೆಂಡ್ ಪುರುಷ ಕ್ರಿಕೆಟ್ ತಂಡದ ಮೊದಲ‌ ನಾಯಕ ವಿಲಿಯಮಗ ಪೋರ್ಟರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿದ್ದಾರೆ.



NOTE


ಒಡಿಶಾದಲ್ಲಿರುವ ಚಿಲಿಕಾ ಸರೋವರವು ಏಷ್ಯಾದ ಅತಿದೊಡ್ಡ ಉಪ್ಪುನೀರಿನ ಆವೃತವಾಗಿದೆ. ದಿ ಫಿಶಿಂಗ್ ಕ್ಯಾಟ್ ಪ್ರಾಜೆಕ್ಟ್ (ಟಿಎಫ್‌ಸಿಪಿ) ಸಹಯೋಗದಲ್ಲಿ ಚಿಲಿಕಾ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ) ನಡೆಸಿದ ಜನಗಣತಿಯ ಪ್ರಕಾರ, ಸರೋವರವು 176 ಮೀನುಗಾರಿಕೆ ಬೆಕ್ಕುಗಳನ್ನು ಹೊಂದಿದೆ.



2010 ರಲ್ಲಿ ಪ್ರಾರಂಭವಾದ ಮತ್ತು ಪ್ರಸ್ತುತ ಭಾರತದಲ್ಲಿ ಎರಡು ರಾಜ್ಯಗಳಲ್ಲಿ: ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ನಡೆಯುತ್ತಿರುವ ಮೀನುಗಾರಿಕೆ ಬೆಕ್ಕುಗಳ ಕುರಿತು ವಿಶ್ವದ ಅತ್ಯಂತ ದೀರ್ಘಾವಧಿಯ ಸಂಶೋಧನೆ ಮತ್ತು ಸಂರಕ್ಷಣಾ ಯೋಜನೆಯಾಗಿದೆ. ಪಶ್ಚಿಮ ಬಂಗಾಳವು 2012ರಲ್ಲಿ ಮೀನುಗಾರಿಕೆ ಬೆಕ್ಕುಗಳನ್ನು ರಾಜ್ಯ ಪ್ರಾಣಿ ಎಂದು ಘೋಷಿಸಿತು ಮತ್ತು 2020 ರಲ್ಲಿ ಚಿಲಿಕಾ ಸರೋವರದ ರಾಯಭಾರಿಯಾಗಿ ಮೀನುಗಾರಿಕಾ ಬೆಕ್ಕನ್ನು ಘೋಷಿಸಲಾಯಿತು.





ಭೂಮಿಯ ರಚನೆ ಮತ್ತು ಸಂಯೋಜನೆ
 ಭೂಕಂಪದ ಅಲೆಗಳ ವೇಗ, ವಸ್ತುಗಳ ಸಾಂಧ್ರತೆ, ರಾಸಾಯನಿಕ ವಸ್ತುಗಳ ಸಂಯೋಜನೆ ಇವುಗಳನ್ನು ಆಧರಿಸಿ ಭೂಮಿಯ ಅಂತರಾಳವನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

1) ಭೂಕವಚ

2) ಮ್ಯಾಂಟಲ್

3) ಕೇಂದ್ರ ಗೋಳ



ಭೂಕವಚ

ಭೂಮಿ ಹೊರ ಪದರಕ್ಕೆ ಭೂಕವಚ ಎನ್ನುವರು.

 ಇದರ ಸರಾಸರಿ 60 ಆಳ ಕಿಲೋಮೀಟರ್ ಗಳಷ್ಟಿದೆ.



ಭೂ ಕವಚವನ್ನು ಸಾಗರಿಕ ಮತ್ತು ಭೂಖಂಡ ಕವಚಗಳು ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

ಭೂಖಂಡ ಕವಚ

 ಭೂಕವಚ ಅತ್ಯಂತ ಮೇಲ್ಪದರ ವಾಗಿದೆ.
 ಈ ಕವಚದ ಸರಾಸರಿ ದಪ್ಪ 30 ಕಿಲೋಮೀಟರ್.



ಭೂಖಂಡ ಕವಚದ ಮೇಲಿನ ಭಾಗವನ್ನು ಸಿಯಾಲ್ (SIAL- ಸಿಲಿಕಾ ಮತ್ತು ಅಲ್ಯೂಮಿನಿಯಂ) ಎಂದು ಕರೆಯುವರು.

ಸಾಗರೀಕ ಕವಚ

ಭೂ ಕವಚದ ತಳಭಾಗವನ್ನು ಸಾಗರೀಕ ಕವಚ ಎನ್ನುವರು.

 ಈ ಕವಚದ ದಪ್ಪ ಸುಮಾರು 5 ಕಿ. ಮೀ ಗಳಷ್ಟಿದೆ.


 ಸಾಗರೀಕ ಕವಚ ಅಧಿಕವಾಗಿ ಸಿಲಿಕಾ ಮತ್ತು ಮೆಗ್ನೀಷಿಯಂ ಅಂಶಗಳನ್ನು ಒಳಗೊಂಡಿರುವುದರಿಂದ ಸೀಮಾ(SIMA) ಎಂದು ಕರೆಯಲಾಗಿದೆ


ಭೂ ಕವಚದ ಎರಡು ಪ್ರಮುಖ ಸೀಮಾ ವಲಯಗಳು

ಕಾನ್ರಡ್ ಸೀಮಾ ವಲಯ - ಸಿಯಾಲ್ ಮತ್ತು ಸೀಮಾ ಪದರಗಳ ನಡುವೆ ಕಂಡುಬರುತ್ತದೆ.




ಮಹರೋವಿಸಿಕ್ ಸೀಮಾ ವಲಯ- ಭೂಕವಚ ಮತ್ತು ಮ್ಯಾಂಟಲ್ ಗಳ ನಡುವೆ ಕಂಡುಬರುತ್ತದೆ.

ಮ್ಯಾಂಟಲ್
 ಭೂ ಅಂತರಾಳದಲ್ಲಿನ ಕವಚದ ಒಳಭಾಗವನ್ನು ಮ್ಯಾಂಟಲ್ ಎನ್ನುವರು.


 ಇದು 60 ಕಿ. ಮೀ ನಿಂದ 2900 ಕಿ. ಮೀ ವರೆಗೆ ವಿಸ್ತರಿಸಿದೆ.


ಅಧಿಕ ಉಷ್ಣತೆಯಿಂದ ಇಲ್ಲಿ ವಸ್ತುಗಳು ಭಾಗಶಃ ದ್ರವ ಅಥವಾ ಶಿಲಾಪಾಕ ಸ್ಥಿತಿಯಲ್ಲಿದೆ.



 ಮಯಾಂಟಲ್ ಕಠಿಣ ಶಿಲೆಗಳಾದ ಮೆಗ್ನೀಷಿಯಂ ಮತ್ತು ಕಬ್ಬಿಣ ಖನಿಜ ಗಳಿಂದ ಸಂಯೋಜನೆಗೊಂಡಿದೆ.




ಎಸ್ತನೋಸ್ಪಿಯರ್ - ಮ್ಯಾಂಟಲ್ ನ ಮೇಲ್ಪದರ ವಾಗಿದೆ. ಇದು ಶಿಲ ಪಾಕದ ಸ್ಥಿತಿಯಲ್ಲಿದೆ.



ಮೆಸೋಸ್ಪಿಯರ್- ಮ್ಯಾಂಟಲ್ ನ ಕೆಳ ಪದರವಾಗಿದೆ. ಇದು ಘನ ರೂಪದಲ್ಲಿದೆ.


ರಪ್ಪಿಟ್ಟೀ ಸೀಮಾ ವಲಯ - ಎಸ್ತನೋ ಸ್ಪಿಯರ್ ಮತ್ತು ಮೆಸೋಸ್ಪಿಯರ್ ನಡುವೆ ಕಂಡುಬರುತ್ತದೆ.



ಗುಟೆನ್ ಬರ್ಗ್ ಸೀಮಾ ವಲಯ - ಮ್ಯಾಂಟಲ್ ಮತ್ತು ಕೇಂದ್ರ ಗೋಳಗಳ ನಡುವೆ ಕಂಡುಬರುತ್ತದೆ.

Post a Comment

Previous Post Next Post