Job Alert: NTAದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ( National Testing Agency-NTA)ದಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.


ಈ ಸಂಬಂಧ ಅಧಿಸೂಚನೆಯನ್ನು ಎನ್ ಟಿಎ ಹೊರಡಿಸಿದ್ದು, ಅಭ್ಯರ್ಥಿಗಳ ಸಾಮರ್ಥ್ಯವನ್ನು ನಿರ್ಣಯಿಸಲು ಸಮರ್ಥ, ಪಾರದರ್ಶಕ ಮತ್ತು ಅಂತರಾಷ್ಟ್ರೀಯ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲು ಒಂದು ಸ್ವಾಲಂಬಿ ಸ್ವಾಯತ್ತ ಸಂಸ್ಥೆಯಾಗಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆಯಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸ್ಥಾಪಿಸಲಾಗಿದೆ ಎಂದಿದೆ.


ಎನ್ ಟಿಎಯಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳಿಗೆ ಆನ್ ಲೈನ್ ಮೂಲಕ ಸೆಪ್ಟೆಂಬರ್ 12ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿರೋದಾಗಿ ಹೇಳಿದೆ.

ಹುದ್ದೆಯ ವಿವರ

 • ನಿರ್ದೇಶಕರು - 4 ಹುದ್ದೆ
 • ಜಂಟಿ ನಿರ್ದೇಶಕರು -2 ಹುದ್ದೆ
 • ಸಂಶೋಧನಾ ವಿಜ್ಞಾನಿ ಸಿ - 01 ಹುದ್ದೆ
 • ಹಿರಿಯ ಪ್ರೋಗ್ರಾಮರ್ - 02 ಹುದ್ದೆ
 • ಉಪ ನಿರ್ದೇಶಕ - 02 ಹುದ್ದೆ
 • ಸಂಶೋಧನಾ ವಿಜ್ಞಾನಿ ಬಿ - 01 ಹುದ್ದೆ
 • ಪ್ರೋಗ್ರಾಮರ್ - 03 ಹುದ್ದೆ
 • ಸಹಾಯಕ ನಿರ್ದೇಶಕರು - 04 ಹುದ್ದೆ
 • ಸಂಶೋಧನಾ ವಿಜ್ಞಾನಿ ಎ - 02 ಹುದ್ದೆ
 • ಹಿರಿಯ ಸೂಪರಿಟೆಂಡೆಂಟ್ - 04 ಹುದ್ದೆ
 • ಸ್ಟೆನೋಗ್ರಾಫರ್ - 03 ಹುದ್ದೆ

ಈ ಹುದ್ದೆಗಳಿಗೆ https://www.nta.ac.in/ ಅಥವಾ http://recruitment.nta.ac.in ಜಾಲತಾಣಕ್ಕೆ ಭೇಟಿ ನೀಡಿ ವಿದ್ಯಾರ್ಹತೆ, ಅರ್ಹತಾ ಮಾನದಂಡ, ಅನುಭವ ಸೇರಿದಂತೆ ಇತರೆ ಮಾಹಿತಿ ನೋಡಬಹುದಾಗಿದೆ. ಅಲ್ಲದೇ ಇದೇ ಲಿಂಕ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-09-2023 ಆಗಿರುತ್ತದೆ.Post a Comment

Previous Post Next Post