ಪಡಿತರ ಚೀಟಿದಾರ'ರೇ ಗಮನಿಸಿ: ಆ.31ರೊಳಗೆ ಈ ಕೆಲಸ ಮಾಡದಿದ್ದರೇ ನಿಮ್ಮ 'ಕಾರ್ಡ್' ರದ್ದು

 


ಬೆಂಗಳೂರು: ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪಡಿತರ ಚೀಟಿದಾರರು ಸೌಲಭ್ಯ ಪಡೆಯೋದಕ್ಕೆ ಇ-ಕೈವೈಸಿ ಕಡ್ಡಾಯವಾಗಿದೆ. ಒಂದು ವೇಳೆ ಇ-ಕೆವೈಸಿ ಮಾಡಿಸದೇ ಇದ್ದರೇ ಅಂತಹ ರೇಷನ್ ಕಾರ್ಡ್ ರದ್ದುಗೊಳಿಸೋ ಸಾಧ್ಯತೆ ಇದೆ. ಹೀಗಾಗಿ ಆಗಸ್ಟ್.31ರ ಒಳಗಾಗಿ ತಪ್ಪದೇ ನಿಮ್ಮ ರೇಷನ್ ಕಾರ್ಡ್ ಗೆ ಕುಟುಂಬದ ಸದಸ್ಯರ ಇ-ಕೆವೈಸಿ ಅಪ್ ಡೇಟ್ ಮಾಡೋದು ಮರೆಯಬೇಡಿ.

ಈಗಾಗಲೇ ಹಲವು ಬಾರಿ ರೇಷನ್ ಕಾರ್ಡ್ ಗೆ ಇ-ಕೆವೈಸಿ ಅಪ್ ಡೇಟ್ ಮಾಡೋದಕ್ಕೆ ಅವಕಾಶ ನೀಡಲಾಗಿತ್ತು. ಹಲವು ಬಾರಿ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿತ್ತು. ಹೀಗಿದ್ದೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರು ತಮ್ಮ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಿಲ್ಲ. ಈ ಹಿನ್ನಲೆಯಲ್ಲಿ ಆಗಸ್ಟ್.31 ಡೆಡ್ ಲೈನ್ ಆಗಿದೆ.

ಇಲ್ಲಿ ಇ-ಕೆವೈಸಿ ಮಾಡಿಸಿ

ಬಿಪಿಎಲ್, ಎಪಿಎಲ್ ಪಡಿತರ ಚೀಟಿದಾರರು, ತಮ್ಮ ಸಮೀಪದ ಆಹಾರ ಇಲಾಖೆಗೆ ಅಥವಾ ರೇಷನ್ ಅಂಗಡಿಗೆ ತೆರಳಿದ್ರೇ, ಕ್ಷಣ ಮಾತ್ರದಲ್ಲಿ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಗೆ ಬಯೋಮೆಟ್ರಿಕ್ ಮೂಲಕ ಲಿಂಕ್ ಮಾಡಲಾಗುತ್ತದೆ. ಒಂದು ವೇಳೆ ಆಗಸ್ಟ್.31ರ ಒಳಗಾಗಿ ನೀವು ಇ-ಕೆವೈಸಿ ಮಾಡಿಸದಿದ್ದರೇ ನಿಮಗೆ ರೇಷನ್ ಕೂಡ ಸಿಗಲ್ಲ. ಕಾರ್ಡ್ ಕೂಡ ರದ್ದಾಗಲಿದೆ.


ಅನ್ನಭಾಗ್ಯ ಹಣಕ್ಕೂ ಇ-ಕೆವೈಸಿ ಆಗಿರಬೇಕು

ಇನ್ನೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದಂತ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ರೇಷನ್ ಕಾರ್ಡ್ ನ ಕುಟುಂಬದ ಯಜಮಾನರ ಖಾತೆಗೆ ಜಮಾ ಮಾಡಲಾಗುತ್ತಿದೆ. ಈ ತಿಂಗಳು ಕೂಡ ಜಮಾ ಆರಂಭಗೊಂಡಿದೆ. ಒಂದು ವೇಳೆ ನೀವು ಇ-ಕೆವೈಸಿ ಮಾಡಿಸದೇ ಇದ್ದರೇ ನಿಮ್ಮ ಬ್ಯಾಂಕ್ ಖಾತೆ ಪಡಿತರ ಚೀಟಿಗೆ ಲಿಂಕ್ ಆಗದ ಕಾರಣ, ಹಣ ಜಮಾ ಆಗೋದಿಲ್ಲ..


Post a Comment

Previous Post Next Post