ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿ





★ PC NEW NOTIFICATION: ★
🌻🍁🌻🍁🌻🍁🌻🍁🌻🍁🌻

  
5000 PC Recruitment Soon 2022//KSP Constable Recruitment 2022: PC 5000 ಹುದ್ದೆಗಳ ಹೊಸ ನೇಮಕಾತಿ ಭರ್ತಿಯ ಸಿಹಿ ಸುದ್ದಿ 2022
KSP Constable Recruitment 2022:Karnataka State Police (KSP) has released a notification for recruitment to the post of Civil Police Constable and Armed Police Constable.

Important Highlights:  
New Update: ★ PC NEW NOTIFICATION: ಪೊಲೀಸ್ ಇಲಾಖೆಯ ಮತ್ತೊಂದು ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!
★ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಲಾಗಿದೆ.!! download Official Notification PDF and Eligibilty Details PDF Given Below 👇
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು, ಹುದ್ದೆ ಪಡೆಯಬೇಕು ಎಂದುಕೊಂಡಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೀಗ ಭರ್ಜರಿ ಗುಡ್‌ ನ್ಯೂಸ್‌ ಒಂದು ಸಿಕ್ಕಿದೆ. 5000 ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಹೇಳಿದ್ದಾರೆ.
ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ, ಸಹಿಷ್ಣುತಾ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಪಿಸಿ ಹುದ್ದೆಗೆ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಆರಂಭಿಸಿ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2022-23ನೇ ಸಾಲಿನಲ್ಲಿ ಈ ಕೆಳಕಂಡ ವೃಂದಗಳ ನೇಮಕಾತಿಗೆ ಸರ್ಕಾರದ ಅನುಮತಿ ದೊರೆತಿದ್ದು, ನೇಮಕ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಆ ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯಸ್ಸಿನ ಅರ್ಹತೆಗಳನ್ನು ಈ ಕೆಳಗಿನಂತೆ ತಿಳಿಸಲಾಗಿದೆ.


ಭರ್ತಿ ಮಾಡುವ ಹುದ್ದೆಗಳ ವಿವರ - Current Available Vacancies List:


ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ


ಒಟ್ಟು ಹುದ್ದೆಗಳು: 3,064 + 420= 3,484


ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ : 300
ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) : 1500
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್ ಮತ್ತು ಡಿಎಆರ್) : 3550
ಒಟ್ಟು ಹುದ್ದೆಗಳು: 5356
ಕನ್ನಡ ದಿನಪತ್ರಿಕೆ ವರದಿ Detail


⭕️More Information Click Below Link


ಹುದ್ದೆವಾರು ವಿದ್ಯಾರ್ಹತೆ- Eligibility criteria Details
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ : ಯಾವುದೇ ಪದವಿ ಪಾಸ್
ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) : ದ್ವಿತೀಯ ಪಿಯುಸಿ ಪಾಸ್ / ತತ್ಸಮಾನ ವಿದ್ಯಾರ್ಹತೆ
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್ ಮತ್ತು ಡಿಎಆರ್) : ದ್ವಿತೀಯ ಪಿಯುಸಿ ಪಾಸ್ / ತತ್ಸಮಾನ ವಿದ್ಯಾರ್ಹತೆ


⭕️ Notifications Jobs | Click Below Links👇


Application Starting Status:- ಈ ಮೇಲಿನ ಹುದ್ದೆಗಳಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಿಸಲಿದ್ದು, ಆಸಕ್ತರು ನಿಗದಿತ ಅರ್ಹತೆ ಹೊಂದಿದಲ್ಲಿ ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಕ್ಕ ಸಿದ್ಧತೆಯಲ್ಲಿ ತೊಡಗಿಕೊಳ್ಳಬಹುದು.

ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ವಯಸ್ಸಿನ ಅರ್ಹತೆಗಳು ಈ ಕೆಳಗಿನಂತಿವೆ. Age Limit Details
- ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
- ಎಸ್‌ಸಿ / ಎಸ್‌ಟಿ / ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.



Selection Process Details:- ಪೊಲೀಸ್ ಇಲಾಖೆಯ ಪಿಎಸ್‌ಐ, ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ, ಸಹಿಷ್ಣುತಾ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಮೂಲದಾಖಲೆಗಳ ಪರಿಶೀಲನೆ ಎಲ್ಲವೂ ಕಡ್ಡಾಯವಾಗಿ ಇರುತ್ತವೆ.


ಪದವಿಗೆ ತತ್ಸಮಾನ ವಿದ್ಯಾರ್ಹತೆಯ ಬಗ್ಗೆ ಈ ಕೆಳಗಿನಂತೆ ತಿಳಿಯಿರಿ


- ಯುಜಿಸಿ ಇಂದ ಮಾನ್ಯತೆ ಪಡೆದ ವಿವಿಗಳು, ಖಾಸಗಿ / ಡೀಮ್ಡ್‌ ಹಾಗೂ ಹೊರರಾಜ್ಯದ ವಿವಿಗಳಿಂದ ಪಡೆದ ಪದವಿಗಳು. ( ಆದರೆ ವಿವಿಗಳ ಪದವಿಯ ತತ್ಸಮಾನದ ಬಗ್ಗೆ ಶಿಕ್ಷಣಕ್ಕೆ ಸಂಬಂಧಿಸಿದ, ಆಯಾ ವಿವಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಉದ್ಯೋಗ ನೀಡುವ ಪ್ರಾಧಿಕಾರ ತೀರ್ಮಾನ ತೆಗೆದುಕೊಳ್ಳುತ್ತದೆ).


ಅಂಚೆ ಮತ್ತು ದೂರ ಶಿಕ್ಷಣದ ಮುಖಾಂತರ ಪಡೆದಿರುವ ಪದವಿಗಳು ಅರ್ಹ. (ಆದರೆ ನಿಯಮಬಾಹಿರವಾಗಿ ಕೆಲವು ವಿಶ್ವವಿದ್ಯಾಲಯಗಳು ಯುಜಿಸಿಯ ಮಾನ್ಯತೆ ಪಡೆಯದೇ ನಡೆಸುತ್ತಿದ್ದು, ಅಂಚೆ ಮತ್ತು ದೂರ ಶಿಕ್ಷಣದ ಕೋರ್ಸ್‌ಗಳನ್ನು ಹಾಗೂ ಅಂಚೆ ಮತ್ತು ದೂರ ಶಿಕ್ಷಣದ ಮುಖಾಂತರ ಪಡೆದ ತಾಂತ್ರಿಕ ಪದವಿಗಳನ್ನು ನೇಮಕಾತಿಗೆ ಪರಿಗಣಿಸುವುದಿಲ್ಲ.)


ಈ ವಿದ್ಯಾರ್ಹತೆಗಳು ಪಿಎಸ್‌ಐ ಹುದ್ದೆಗೆ ಅರ್ಹವಲ್ಲ
- ಡಿಪ್ಲೊಮ ವಿದ್ಯಾರ್ಹತೆಗಳು ಪದವಿಗೆ ಸಮಾನವಾಗುವುದಿಲ್ಲ. ಆದ್ದರಿಂದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ಈ ವಿದ್ಯಾರ್ಹತೆಯ ಅಭ್ಯರ್ಥಿಗಳು ಅರ್ಹರಾಗಿರುವುದಿಲ್ಲ.
- ನಿಗದಿತ ವಿದ್ಯಾರ್ಹತೆಯಾದ ಪದವಿಯನ್ನು ಪಡೆಯಲು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಹಾಗೂ ಅಂಕಪಟ್ಟಿ ಇಲ್ಲದೆ ಇರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ. ಮೇಲಿನ ವಿದ್ಯಾರ್ಹತೆಯನ್ನು ಹೊರತುಪಡಿಸಿ ಬೇರೆ ಯಾವ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ.


ಮೇಲೆ ನಮೂದಿಸಿರುವ ವಿದ್ಯಾರ್ಹತೆ ಹಾಗೂ ಅನುಭವವನ್ನು ಹೊಂದದೇ ಇರುವ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ನಂತರ ನಿಗದಿಪಡಿಸಲಾದ ವಿದ್ಯಾರ್ಹತೆ ಮತ್ತು ಅನುಭವವನ್ನು ಹಾಗೂ ಅಂಕಪಟ್ಟಿ ಹೊಂದಿರುವುದಿಲ್ಲವೆಂದು ನೇಮಕಾತಿ ಸಮಿತಿಗೆ ತಿಳಿದುಬಂದಲ್ಲಿ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಯಾವುದೇ ಹಂತದಲ್ಲಾದರೂ ರದ್ದುಪಡಿಸಲಾಗುತ್ತದೆ.


 


⭕️ ಹೆಚ್ಚಿನ ಉದ್ಯೋಗ ಮಾಹಿತಿಯನ್ನು ತಿಳಿದುಕೊಳ್ಳಲು, ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:


⭕️ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿತಿರುವ ಮತ್ತು ಉದ್ಯೋಗ ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ವಾಟ್ಸಪ್ಪ್ ಗ್ರೂಪಗೆ ಜಾಯಿನ್ ಆಗಿ :~



⭕️ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿತಿರುವ ಮತ್ತು ಉದ್ಯೋಗ ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಜಾಯಿನ್ ಆಗಿ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ :~

Post a Comment

Previous Post Next Post