ಪ್ರಚಲಿತ ವಿದ್ಯಮಾನಗಳು ಮತ್ತು ಇತಿಹಾಸದ ಪ್ರಶ್ನೋತ್ತರಗಳು

‘ಸಂಗಮ್ ಯುಗ’ ಬಹು ಆಯ್ಕೆ ಪ್ರಶ್ನೆಗಳು!



1.ಸಂಗಮ್ ಯುಗದ ಆರ್ಥಿಕ ವಹಿವಾಟುಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ



ಎ. ಸಂಗಮ್ ಸಮಯದಲ್ಲಿ ತಮಿಳುನಾಡು ಪ್ರದೇಶವು ಅರೇಬಿಯಾ, ಈಜಿಪ್ಟ್ ಮತ್ತು ರೋಮ್ ದೇಶಗಳ ಜೊತೆ ವ್ಯಾಪಾರ ಸಂಬಂಧವನ್ನು ಹೊಂದಿತ್ತು.


ಬಿ. ಇದನ್ನು ಪೆರಿಪ್ಲಸ್ ಗ್ರಂಥದಲ್ಲಿ ಮತ್ತು ವಿದೇಶಿ ಬರಹಗಾರರ ಇತರ ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ.




ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಆರಿಸಿರಿ



1.ಹೇಳಿಕೆ ಎ ಸರಿಯಾಗಿದೆ.
2. ಹೇಳಿಕೆ ಬಿ ಸರಿಯಾಗಿದೆ.
3. ಎರಡೂ ಹೇಳಿಕೆಗಳು ತಪ್ಪಾಗಿವೆ.
4.ಎರಡೂ ಹೇಳಿಕೆಗಳು ಸರಿಯಾಗಿವೆ.



ಉತ್ತರ 4




2.ಈ ಕೆಳಗಿನ ಯಾವ ಕೃತಿಯು ಚೋಳ ಸಾಮ್ರಾಜ್ಯದ ಪುಹಾರ್ ಪಟ್ಟಣದ ವರ್ತಕ ಕೋವಲಂ ಎಂಬುವವನು ಮಾಧವಿ ಎಂಬ ನರ್ತಕಿಯನ್ನು ಪ್ರೇಮಿಸಿ ತನ್ನ ಸ್ವಂತ ಹೆಂಡತಿಯಾದ ಕನ್ನಗಿಯನ್ನು ಕಡೆಗಣಿಸುವ ದುರಂತ ಪ್ರೇಮಕಥಾನಕವನ್ನು ಚಿತ್ರಿಸುತ್ತದೆ?



ಎ. ಶಿಲಪ್ಪದಿಗಾರಂ
ಬಿ. ಪತ್ತಿನಪ್ಪಲೈ
ಸಿ. ಮಧುರೈಕಂಜಿ
ಡಿ. ತಿರುಕ್ಕುರಲ್



ಉತ್ತರ: ಎ



3. ಈ‌ ಕೆಳಗಿನ ಯಾವ ಕೃತಿಯು ಕೋವಲಂ ಮತ್ತು ನರ್ತಕಿ ಮಾಧವಿಯ ಸುಂದರ ಮಗಳ ಕಥೆಯನ್ನು ಹೇಳುತ್ತದೆ?



ಎ. ಎಟ್ಟುತ್ತೊಗೈ
ಬಿ. ಮಣಿಮೇಖಲೈ
ಸಿ. ತಿರುಕ್ಕುರಲ್
ಡಿ. ಸಿಲಪ್ಪತಿಗಾರಂ



ಉತ್ತರ. ಬಿ




4. ಮಣಿಮೇಖಲೈ ಕೃತಿಯ ಬಗ್ಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ



ಎ. ಈ ಕೃತಿಯು ಮಣಿಮೇಖಲೈ ಹೇಗೆ ರಾಜಕುಮಾರ ಉದಯಕುಮಾರ್ ನಿಂದ ರಕ್ಷಿಸಿಕೊಂಡಳು ಎಂಬ ಕತೆಯನ್ನು ಹೇಳುತ್ತದೆ.




ಬಿ. ಕತೆಯ ಅಂತ್ಯದಲ್ಲಿ ಮಣಿಮೇಖಲೈ ಬೌದ್ಧ ಸನ್ಯಾಸಿಯಾಗಿ ಬೌದ್ಧ ಧರ್ಮದ ಪ್ರಚಾರ ಕಾರ್ಯವನ್ನು ಕೈಗೊಳ್ಳುತ್ತಾಳೆ ಎಂಬ ವಿವರವನ್ನು ನೀಡುತ್ತದೆ.



ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಆರಿಸಿರಿ




1.ಹೇಳಿಕೆ ಎ ಸರಿಯಾಗಿದೆ.
2.ಹೇಳಿಕೆ ಬಿ ಸರಿಯಾಗಿದೆ.
3.ಎರಡೂ ಹೇಳಿಕೆಗಳು ತಪ್ಪಾಗಿವೆ. 4.ಎರಡೂ ಹೇಳಿಕೆಗಳು ಸರಿಯಾಗಿವೆ.




ಉತ್ತರ.4



5.ತಮಿಳುನಾಡಿನಲ್ಲಿ ಸಂಗಮ್ ಅವಧಿಯಲ್ಲಿ ಹುಟ್ಟಿಕೊಂಡ ‘ಪತ್ತಿನಿ ಪಂಥ’ದ ಬಗ್ಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ



ಎ. ಪತ್ತಿನಿ ಪಂಥವನ್ನು ಕನ್ನಗಿ ಪಂಥ ಎಂದೂ ಹೇಳುತ್ತಾರೆ.




ಬಿ. ಕನ್ನಗಿ ಎಂದರೆ ‘ಶೀಲವಂತೆ ಪತ್ನಿ’ ಎಂದು ಅರ್ಥ.



ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಆರಿಸಿರಿ



1.ಹೇಳಿಕೆ ಎ ಸರಿಯಾಗಿದೆ.
2.ಹೇಳಿಕೆ ಬಿ ಸರಿಯಾಗಿದೆ.
3.ಎರಡೂ ಹೇಳಿಕೆಗಳು ತಪ್ಪಾಗಿವೆ. 4.ಎರಡೂ ಹೇಳಿಕೆಗಳು ಸರಿಯಾಗಿವೆ.



ಉತ್ತರ. 4




6.ತಮಿಳುನಾಡಿನಲ್ಲಿ ಕನ್ನಗಿಯನ್ನು ಆದರ್ಶ ಪತ್ನಿಯಾಗಿ ಪೂಜಿಸುವ ಪರಿಪಾಠವನ್ನು ಪರಿಚಯಿಸಿದವರು ಯಾರು ?


ಎ. ಚೇರನ್ ಸೆಂಗುಟ್ಟವನ್
ಬಿ. ಮಾಂಗುಡಿ ಮರುದನ್
ಸಿ. ಉದಿಯೆಂಜರಲ್
ಡಿ. ಕರಿಕಾಲಚೋಳ




ಉತ್ತರ. ಎ




7.ಯಾವ ಸಾಹಿತ್ಯ ಕೃತಿಯು ಕರಿಕಾಲ ಚೋಳನ ಆರಂಭಿಕ ಜೀವನ ಮತ್ತು ಸೆರೆಮನೆಯಿಂದ ತಪ್ಪಿಸಿ ಬಂದು ಅವನು‌ ಮರಳಿ ಸಿಂಹಾಸನವನ್ನು ಪಡೆದ ವೀರಕಥಾನಕವನ್ನು ಚಿತ್ರಿಸುತ್ತದೆ ?



ಎ. ಪತ್ತಿನಪ್ಪಲೈ
ಬಿ. ಪಾದಿರ್ರುಪ್ಪಟ್ಟು
ಸಿ. ಸಿಲಪ್ಪತಿಗಾರಂ
ಡಿ. ಮಣಿಮೇಖಲೈ




ಉತ್ತರ. ಎ



8.ಮಾಂಗುಡಿ ಮರುದನ್ ಬರೆದ ಈ‌ ಕೆಳಗಿನ‌ ಯಾವ ಗ್ರಂಥವು ಪಾಂಡ್ಯ ಮತ್ತು‌ ಮಧುರೈ ದೇಶದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ವಿವರಿಸುತ್ತದೆ ?



ಎ. ಮಧುರೈಕ್ಕಂಜಿ
ಬಿ. ಪುರನಾನೂರು
ಸಿ. ನರ್ರಿನೈ
ಡಿ. ಕಲಿತ್ತೊಗೈ



ಉತ್ತರ. ಎ




9.ಚೇರನ್ ಸೆಂಗುಟ್ಟುವನ್ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.



1. ಚೇರನ್ ಸೆಂಗುಟ್ಟುವನ್ ಚೇರ ಸಂತತಿಯ ಜನಪ್ರಿಯ ದೊರೆಯಾಗಿದ್ದನು




2. ಪದಿರುಪ್ಪಟ್ಟು, ಪುರನಾನೂರ್ ಮತ್ತು ಶಿಲಪ್ಪದಿಗಾರಂ ಕೃತಿಗಳಲ್ಲಿ ಚೇರನ್ ಸೆಂಗುಟ್ಟುವನ್ ಬಗ್ಗೆ ಹೇರಳವಾಗಿ ವರ್ಣಿಸಲಾಗಿದೆ.



ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಆರಿಸಿರಿ



1.ಹೇಳಿಕೆ ಎ ಸರಿಯಾಗಿದೆ.‌
2.ಹೇಳಿಕೆ ಬಿ ಸರಿಯಾಗಿದೆ.
3.ಎರಡೂ ಹೇಳಿಕೆಗಳು ತಪ್ಪಾಗಿವೆ.
4.ಎರಡೂ ಹೇಳಿಕೆಗಳು ಸರಿಯಾಗಿವೆ.



ಉತ್ತರ. 4

Post a Comment

Previous Post Next Post