ಪ್ರಪಂಚದ ಪ್ರಮುಖ ಮರುಭೂಮಿಗಳು ಕುರಿತು ಓದಿಷ್ಟು ಮಾಹಿತಿಪ್ರಪಂಚದ ಪ್ರಮುಖ ಮರುಭೂಮಿಗಳುಭೂಮಿಯ ಯಾವ ಪ್ರದೇಶದಲ್ಲಿ ನೀರಿನ ಪ್ರಮಾಣವು ಕಡಿಮೆ ಇರುತ್ತದೋ ಅಥವಾ ವಾರ್ಷಿಕವಾಗಿ 250 ಮಿ.ಮೀಗಿಂತ ಕಡಿಮೆ ಇರುತ್ತದೋ ಅಂತಹ ಪ್ರದೇಶವನ್ನು ಮರುಭೂಮಿ ಎಂದು ಕರೆಯುತ್ತಾರೆ.


1.ಅಂಟಾರ್ಟಿಕ ಮರುಭೂಮಿ2.ಸಹಾರ ಮರುಭೂಮಿ3.ಆರ್ಟಿಕ್ ಮರುಭೂಮಿ4.ಅರೇಬಿಯನ್ ಮರುಭೂಮಿ5.ಕಲಹರಿ ಮರುಭೂಮಿ6.ಪೆಟಗೋನಿಯನ್ ಮರುಭೂಮಿ7.ಗ್ರೇಟ್ ವಿಕ್ಟೋರಿಯಾ ಮರುಭೂಮಿ8.ಗ್ರೇಟ್ ಬಸಿನ್ ಮರುಭೂಮಿ9.ಸೈರಿಯನ್ ಮರುಭೂಮಿ10 ಅಂಟಾರ್ಟಿಕ ಮರುಭೂಮಿಅಂಟಾರ್ಟಿಕ ಮರುಭೂಮಿಯು ದಕ್ಷಿಣ ಧ್ರುವದಲ್ಲಿ ಕಂಡು ಬರುವ ಮರುಭೂಮಿಯಾಗಿದೆ.


 ಈ ಮರುಭೂಮಿಯು ಜಗತ್ತಿನ ವಿಸ್ತೀರ್ಣದಲ್ಲಿ ಅತಿ ದೊಡ್ಡ ಮರುಭೂಮಿಯಾಗಿದ್ದು ಶೀತಮರುಭೂಮಿಯಾಗಿದ. ಈ ಮರುಭೂಮಿಯು ಹಿಮದಿಂದ ಕೂಡಿದ್ದು, ಸರಾಸರಿ 1.6 ಕಿ.ಮೀ ದಪ್ಪದ ಹಿಮವನ್ನು ಒಳಗೊಂಡಿದೆ. ಇಲ್ಲಿ ಪೆಂಗ್ವಿನ್, ನೀಲಿ ತಿಮಿಂಗಿಲ, ಸೀಲ್ ಪ್ರಮುಖ ಪ್ರಾಣಿಗಳಿವೆ. ಸಹಾರ ಮರುಭೂಮಿ ಸಹರಾ ಮರುಭೂಮಿಯು ಉತ್ತರ ಆಫ್ರಿಕಾ ಖಂಡದಲ್ಲಿದೆ. ಈ ಮರುಭೂಮಿಯನ್ನು "ಗ್ರೇಟ್ ಡೆಸರ್ಟ್" ಎಂದು ಕರೆಯುವರು, ಇದು ಅಲ್ಜೀರಿಯಾ, ಚಾದ್, ಈಜಿಪ್ಪ್, ಲಿಬಿಯಾ ಎರಿಟ್ರಿಯಾ, ಮಾಲಿ, ಮಾಯುರಟಾನಿಯ, ಮಾರಕೋ, ನೈಜಿರ್, ಸುಡಾನ್ ಟುನೇಶಿಯಾ ವೆಸ್ಟರ್ ಸಹಾರ್ ದೇಶಗಳಲ್ಲಿ ಹರಡಿಕೊಂಡಿದೆ.
ಇದರ ವಿಸ್ತೀರ್ಣ 9,100,000 ಚ.ಕಿ.ಮೀ ಆಗಿದ್ದು ಜಗತ್ತಿನ 2 ನೇ ಅತಿದೊಡ್ಡ ಮರುಭೂಮಿ, ಜಗತ್ತಿನ ಅತಿ ದೊಡ್ಡ "ಉಷ್ಣ ಮರುಭೂಮಿ" ಆಗಿದೆ.ಇಲ್ಲಿ ಕಂಡು ಬರುವ ಪ್ರಾಣಿಗಳೆಂದರೆ ಒಂಟೆ, ಚಿರತೆ, ನರಿ, ಹಲ್ಲಿ, ಆಫ್ರಿಕನ್ ಕಾಡು ನಾಯಿ, ಉಷ್ಟ್ರಪಕ್ಷಿ, ಮರುಭೂಮಿ ಮೊಸಳೆ. ಆರ್ಟಿಕ್ ಮರುಭೂಮಿ ಆರ್ಟಿಕ್ ಮರುಭೂಮಿ ಭೂಮಿಯ ಉತ್ತರ ದ್ರುವದಲ್ಲಿ ಕಂಡು ಬರುತ್ತದೆ. ಈ ಮರುಭೂಮಿ ಜಗತ್ತಿನ 3ನೇ ದೊಡ್ಡ ಮರುಭೂಮಿಯಾಗಿದ್ದು ಹಾಗೂ 2ನೇ ಅತಿ ದೊಡ್ಡ ಶೀತ ಮರುಭೂಮಿಯಾಗಿದೆ.


 ಇದರ ವಿಸ್ತೀರ್ಣವು 2,600,000 ಚ.ಕಿ.ಮೀಗಳಾಗಿವೆ. ಈ ಮರುಭೂಮಿ ಹಿಮದಿಂದ ಕೂಡಿದೆ. ಈ ಮರುಭೂಮಿಯು ಅರ್ಟಿಕ್ ಸಾಗರ, ಕೆನಡಾ, ರಷ್ಯಾ, ಗ್ರೀನಲ್ಯಾಂಡ್, ಯುನೈಟೆಡ್ ಸ್ಪೇಟ್ಸ್, ನಾರ್ವೆ, ಸ್ಪೀಡನ್, ಪಿನಲ್ಯಾಂಡನ್ ಸ್ಪಲ್ಪ ಭಾಗವನ್ನು ಒಳಗೊಂಡಿದೆ. ಇಲ್ಲಿನ ಪ್ರಮುಖ ಪ್ರಾಣಿಗಳೆಂದರೆ ಆರ್ಟಿಕ್ ಮೊಲಸಾರಂಗ, ಅರ್ಟಿಕ್ ನರಿ ಮತ್ತು ತೋಳ, ಧ್ರುವ ಕರಡಿ, ಸೀಲ್, ಮುಂತಾದವುಗಳು.ಈ ಮರುಭೂಮಿಯು ಇತ್ತೀಚಿಗೆ ಜಾಗತಿಕ ತಾಪಮಾನ ಫಲವಾಗಿ ಇಲ್ಲಿನ ನೀರ್ಲಗಲ್ಲುಗಳು ಕರಗುತ್ತಿದೆ.ಅರೇಬಿಯನ್ ಮರುಭೂಮಿ
 ಈ ಮರುಭೂಮಿಯು ಮಧ್ಯ ಪೂರ್ವ ಪ್ರಾಂತ್ಯದಲ್ಲಿದ್ದು, ಇದು ಯಮನ್ ದೇಶದಿಂದ ಪರ್ಷಿಯನ್ ಗಲ್ಪ್ ವರೆಗೂ ಮತ್ತು ಒಮಾನ್ ನಿಂದ ಜೋರ್ಡಾನ ಮತ್ತು ಇರಾಕ್ ವರೆಗೂ ವಿಸ್ತರಿಸಿದೆ. ಇದು ಅರೆಬಿಯನ್ ಉಪಖಂಡದಲ್ಲಿ ವ್ಯಾಪಿಸಿದೆ. ಇದು ಜೋರ್ಡಾನ್, ಕುವೈತ್, ಇರಾಕ್, ಕತಾರ್, ಉಮ್ಮಾನ್, ಸೌದಿ ಅರೇಬಿಯಾ, ಯುನೈಟೆಡ್ ಎಮರೈಟಿಸ್, ಎಮನ್ ದೇಶದಲ್ಲಿ ವ್ಯಾಪಿಸಿದೆ.
 ಇದರ ವಿಸ್ತೀರ್ಣವು 2,330,000 ಚ.ಕಿ.ಮೀ, ಇಲ್ಲಿ ತೈಲ ಸ್ವಾಭಾವಿಕ ಅನಿಲ, ಪಾಸ್ಪೇಟ್, ಮತ್ತು ಗಂಧಕದ ಸಂಪನ್ಮೂಲವಿದೆ. ಈ ಮರುಭೂಮಿ ಬಹುತೇಕ ಸೌದಿ ಅರೇಬಿಯಾದಲ್ಲಿ ವಿಸ್ತರಿಸಿಕೊಂಡಿದೆ.
 ಕಲಹರಿ ಮರುಭೂಮಿ

 ಈ ಮರುಭೂಮಿಯು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬರುವ ಉಷ್ಣ ಮರುಭೂಮಿಯಾಗಿದೆ. ಈ ಮರುಭೂಮಿಯಲ್ಲಿ ಬಾಡ್ಸಾನಾ, ನಮೀಬಿಯಾ, ದಕ್ಷಿಣ ಆಪ್ರ್ಹಿಕಾ ದೇಶಗಳಲ್ಲಿ ವ್ಯಾಪಿಸಿದೆ.
 ಈ ಮರುಭೂಮಿಯಲ್ಲಿ ಚೋಬೆ ನ್ಯಾಷನಲ್ ಪಾರ್ಕ, ಸೆಂಟ್ರಲ್ ಕಲಹರಿ ಗೇಮ್ ರಿಸರ್ವ, ಕಲಹರಿ ಬೇಸಿನ್ಸ್, ಕಲಹರಿ ಜೇಮ್ಸ್ ಬಾಕ್ ನ್ಯಾಷನಲ್ ಪಾರ್ಕ, ಮಾಕಗಾಡಿ ಪಾನ್ಸ್ ಸ್ಥಳಗಳು ಕಂಡು ಬರುತ್ತವೆ.
ಕಲಹರಿ ಮರುಭೂಮಿಯ ವಿಸ್ತೀರ್ಣ 900,000 ಚ.ಕಿ.ಮೀ ಈ ಮರುಭೂಮಿ ಪಕ್ಕದಲ್ಲಿ ಅರೆಂಜ್ ನದಿಯು ಹರಿಯುತ್ತದೆ. ಬ್ರಾಂಡ್ ಬರ್ಗ ಪರ್ವತವು ಅತಿ ದೊಡ್ಡ ಪರ್ವತವಾಗಿದೆ 8560 ಅಡಿ.

 ಪೆಟಗೋನಿಯನ್ ಮರುಭೂಮಿ ಈ ಮರುಭೂಮಿಯು ವಿಸ್ತೀರ್ಣದಲ್ಲಿ ಜಗತ್ತಿನ 7ನೇ ದೊಡ್ಡ ಮರುಭೂಮಿ. ಈ ಮರುಭೂಮಿಯ ವಿಸ್ತೀರ್ಣ 670,000 ಚ.ಕಿ.ಮೀಗಳು.
 ಈ ಮರುಭೂಮಿಯು ದಕ್ಷಿಣ ಅಮೇರಿಕಾದಲ್ಲಿ ಕಂಡು ಬರುವ ಉಷ್ಣ ಮರುಭೂಮಿಯಾಗಿದ್ದು, ಪ್ರಮುಖವಾಗಿ ಅರ್ಜೆಂಟೈನಾ ಮತ್ತು ಚಿಲಿ ದೇಶಗಳಲ್ಲಿ ವ್ಯಾಪಿಸಿದೆ.
ಇಲ್ಲಿ ಹುಲ್ಲುಗಳಿಗೆ ಬದಲಾಗಿ ಪೊದೆಗಳು ಕಂಡು ಬರುತ್ತದೆ. ಈ ಮರುಭೂಮಿಯಲ್ಲಿ ಕಂಡು ಬರುವ ಪ್ರಾಣಿಗಳೆಂದರೆ ಗೂಬೆ, ಮರುಭೂಮಿ ಹಲ್ಲಿ, ಪಿಗ್ಮಿ ಆರಿಡಿಲೋ ಮುಂತಾದಗಳು.
ಗ್ರೇಟ್ ವಿಕ್ಟೋರಿಯಾ ಮರುಭೂಮಿ

ದಕ್ಷಿಣ ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಮರುಭೂಮಿಯಾಗಿದೆ, ಇದು ಆಸ್ಟ್ರೇಲಿಯಾದ ಅತಿ ದೊಡ್ಡ ಮರುಭೂಮಿ ಸಣ್ಣ ಸಣ್ಣ ಮರಳಿನ ಬೆಟ್ಟೆಗಳು ಕಂಡು ಬರುತ್ತದೆ.
 1875ರಲ್ಲಿ ಬ್ರಿಟಿಷ್ ನಾವಿಕ ಎರನೆಸ್ಟ್ ಗೆಲಿಸ್ ಮೊಟ್ಟ ಮೊದಲ ಬಾರಿಗೆ ಈ ಮರುಭೂಮಿಯಲ್ಲಿ ಹಾದು ಹೋದ ಯುರೋಪಿಯೆನ್ ಆಗಿದ್ದಾರೆ.
ಈ ಮರುಭೂಮಿಯಲ್ಲಿ ವರ್ಲ್ಡ ವೈಡ್ ಲೈಫ್ ಫಂಡ್ ನ ಎಕೋ ರಿಜನ್ ಆಗಿದೆ. ಈ ಮರುಭೂಮಿಯಲ್ಲಿ ಗ್ರೇಟ್ ಡೆಸರ್ಟ ಸ್ಕಿಂಕ್ ಮತ್ತು ಸ್ಯಾಂಡಿ ಹಿಲ್ ಡುನಾಲ್ಡ್ ಎಂಬ ಪ್ರಾಣಿ ಕಂಡು ಬರುತ್ತದೆ. ಗ್ರೇಟ್ ಬಸಿನ್ ಮರುಭೂಮಿ
ಈ ಮರುಭೂಮಿಯು ಉತ್ತರ ಅಮೇರಿಕಾದಲ್ಲಿ ವ್ಯಾಪಿಸಿದೆ. ಈ ಮರುಭೂಮಿಯು 492,000 ಕಿ.ಮೀ ವಿಸ್ತೀರ್ಣ ಹೊಂದಿದೆ. ಈ ಮರುಭೂಮಿಯು ನವೆಡಾ, ಕ್ಯಾಲಿಪೋರ್ನಿಯಾ, ಉತ್ತಾ ದೇಶಗಳಿಂದ ಕೊಲೊಡೊ ನದಿಯವರೆಗೆ ವ್ಯಾಪಿಸಿದೆ. ಇದು ಪ್ರಮುಖವಾಗಿ ಯುನೈಟೆಡ್ ಸ್ಟೇಟ್ಸ್ ದೇಶದಲ್ಲಿ ಹರಡಿಕೊಂಡಿದೆ.
 ಇಲ್ಲಿ ಆಲ್ಟ್ರಿಪ್ಲೆಕ್ಸ್ ಎಂಬ ವಿಶೇಷ ಜಾತಿಯ ಸಸ್ಯವು ಕಂಡು ಬರುತ್ತದೆ. ಸೆಜೆ ಬ್ರಷ್ ಎಂಬುದು ಈ ಮರುಭೂಮಿಯಲ್ಲಿ ಕಂಡುಬರುವ ಪ್ರಮುಖವಾದಂತಹ ಸಸ್ಯವಾಗಿದೆ.
 ಸೈರಿಯನ್ ಮರುಭೂಮಿ

ಈ ಮರುಭೂಮಿಯು ಮಧ್ಯಪೂರ್ವ ಪ್ರಾಂತ್ಯದಲ್ಲಿ ಕಂಡು ಬರುತ್ತದೆ. ಈ ಮರುಭೂಮಿಯು ಜಗತ್ತಿನ ಅತಿ ದೊಡ್ಡ ಮರುಭೂಮಿಯಾಗಿದೆ.
ಇದರ ವಿಸ್ತೀರ್ಣ 520,000 ಆಗಿದೆ. ಈ ಮರುಭೂಮಿಯು ಸೈರಿಯಾ, ಇರಾಕ್, ಜೋಡಾರ್ನ, ಸೌದಿ ಅರೇಬಿಯಾಗಳಲ್ಲಿ ಕಂಡು ಬರುತ್ತದೆ.

Post a Comment

Previous Post Next Post