ಭರ್ಜರಿ ಉದ್ಯೋಗವಕಾಶ : `ಕೆನರಾ ಬ್ಯಾಂಕ್' ನಲ್ಲಿ 500 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ|Canara Bank Recruitment 2023

 
ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಕೆನರಾ ಬ್ಯಾಂಕ್ ಸಿಹಿ ಸುದ್ದಿ ನೀಡಿದೆ. 500 ಪ್ರೊಬೇಷನರಿ ಆಫೀಸರ್ / ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.


ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ ಒಟ್ಟು 500 ಪ್ರೊಬೇಷನರಿ ಆಫೀಸರ್ / ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆ ದಿನಾಂಕದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ.

ಅಧಿಕೃತ ವೆಬ್ಸೈಟ್: https://ibpsonline.ibps.in/crppo13jun23/

ಶೈಕ್ಷಣಿಕ ಅರ್ಹತೆ:

ಕೆನರಾ ಬ್ಯಾಂಕ್ ಬಿಡುಗಡೆ ಮಾಡಿದ ನೇಮಕಾತಿ ಅಧಿಸೂಚನೆಯ ಪ್ರಕಾರ. ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಮಂಡಳಿಯಿಂದ ಪದವಿ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ:

ಆಗಸ್ಟ್ 1, 2023 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳನ್ನು ಮೀರಬಾರದು.

ವಯೋಮಿತಿ ಸಡಿಲಿಕೆ:

ಒಬಿಸಿ (ಎನ್ಸಿಎಲ್) ಅಭ್ಯರ್ಥಿಗಳಿಗೆ – 3 ವರ್ಷ

ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ

ಪಿಡಬ್ಲ್ಯೂಡಿ ಅಭ್ಯರ್ಥಿಗಳು – 10 ವರ್ಷ

ಅರ್ಜಿ ಶುಲ್ಕ:

ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 175 ರೂ.

ಇತರೆ ಅಭ್ಯರ್ಥಿಗಳಿಗೆ – 850 ರೂ ಪಾವತಿ ವಿಧಾನ – ಆನ್ಲೈನ್


ಆಯ್ಕೆ ಪ್ರಕ್ರಿಯೆ:

– ಪೂರ್ವಭಾವಿ ಪರೀಕ್ಷೆ

– ಮುಖ್ಯ ಪರೀಕ್ಷೆ

– ಸಂದರ್ಶನ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 01-08-2023

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 21-08-2023


Post a Comment

Previous Post Next Post